About Us

ಶ್ರೀ ಜಗದಂಬಾ ವಿದ್ಯಾವರ್ಧಕ ಸಂಘ, ಹಿಟ್ಟಿನಹಳ್ಳಿ LT
ಶಿಕ್ಷಣ ಪ್ರೇಮಿ ಮತ್ತು ಹರಿಕಾರರಾದ ಶ್ರೀ ಫೂಲಸಿಂಗ್ ನಾರಾಯಣ್ ಚವ್ಹಾಣ ಬಡ ಕುಟುಂಬದಲ್ಲಿ ಜನಿಸಿ ಶಿಕ್ಷಣವನ್ನು ಪಡೆದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷರಾಗಿದ್ದರು. ಇವರು ಸರ್ಕಾರಿ ಪ್ರಾಥಮಿಕ ಶಿಕ್ಷಕ ವೃತ್ತಿ ಮಾಡುತ್ತಲೇ ಹಿಂದುಳಿದ ಜನಾಂಗದ ಮಕ್ಕಳ ಶಿಕ್ಷಣಗೋಸ್ಕರ ಹಗಲಿರುಳು ಶ್ರಮ ವಹಿಸಿ ಸರ್ಕಾರದಿಂದ ಶಿಕ್ಷಣ ಸಂಸ್ಥೆಯನ್ನು 1971-72 ನೇ ಸಾಲಿನಲ್ಲಿ ನೊಂದಣಿ ಮಾಡಿಕೊಂಡು ಸದರಿ ಸಂಸ್ಥೆಗೆ ಶ್ರೀ ಜಗದಂಬಾ ವಿದ್ಯಾವರ್ಧಕ ಸಂಘ ತಂಬಾ ತಾ: ಇಂಡಿ ಎಂದು ನಾಮಕರಣ ಮಾಡಿದರು.
ಮೊದಲ ಬಾರಿಗೆ ಪ್ರಾಥಮಿಕ ಶಿಕ್ಷಣವನ್ನು ಹಿಂದುಳಿದ ತಾಂಡಾಗಳಲ್ಲಿ ಪ್ರಾರಂಭಿಸಿ ಬಡ ಮಕ್ಕಳಿಗೆ ವಿದ್ಯೆ ಕಲಿಯಲು ಅನುವು ಮಾಡಿಕೊಟ್ಟರು. ತದನಂತರ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗು ಉನ್ನತ ಶಿಕ್ಷಣಕ್ಕಾಗಿ ಪದವಿ ಕಾಲೇಜು ಅದೇರೀತಿಯಾಗಿ ಸ್ನಾತಕೋತ್ತರ ಬಿ.ಈಡ, ಹಾಗು ಎಮ್.ಎಡ್, ಎಮ್.ಎಸ.ಡಬ್ಲ್ಯೂ ಮತ್ತು ಎಮ್. ಎ ಕೋರ್ಸುಗಳನ್ನು ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೆ ವಿದ್ಯೆ ಸಿಗುವ ಹಾಗೆ ಮಾಡಿದ ಧೀಮಂತ ನಾಯಕರಾಗಿದ್ದರು.
ಅದೇ ಸಾರಥ್ಯದಲ್ಲಿ ಅವರ ಸುಪುತ್ರರಾದ ಡಾ.ದೇವಾನಂದ್ ಚವ್ಹಾಣ ಹಾಗೂ ರವಿಕುಮಾರ್ ಚವ್ಹಾಣ ಈ ಸಂಸ್ಥೆಯನ್ನು
ಯಶಸ್ವಿಯಾಗಿ ಮುಂದುವರಿಸಿಕೊಂಡು ಹೊರಟಿರುವರು.
Contact
Location:
Hittinahalli LT, Tq:Sindagi, Dist: Vijayapura 586215
Email:
sjfgmsw@gmail.com
Call:
9845247791